Monday 17 November, 2008

ನಾನು ಬುದ್ಧನಾಗುವುದಿಲ್ಲ........

ಸಾಗುತಿದೆ ಶವಯಾತ್ರೆ
ಅನಂತದೆಡೆಗೆ
ಜೊತೆಗೆ
ಅಳು ಆಕ್ರಂದನ
ಬೆಂಕಿ ಮಡಿಕೆ
ಚಟ್ಟ ಕಟ್ಟಿಗೆ
ಕಂಡರೂ
ನಾನಾಗುವುದಿಲ್ಲವೇಕೆ ಬುದ್ಧ?

ಚರ್ಮಕ್ಕೆಲ್ಲ ತೊನ್ನು
ಒಂಟಿಕೈ
ತಿರುಚಿದ ಕಾಲು
ಸುರಿಯುತ್ತಿದೆ ಸಿಂಬಳ
ಆಗಾಗ ವಾಂತಿ
ಕಜ್ಜಿ ತುರಿ
ಎಂಜಲೆಲೆಗಳ ಮಧ್ಯೆ
ಹುಡುಕಾಟ ಬದುಕಿಗಾಗಿ ಅಲ್ಲೂ ಸ್ಪರ್ಧೆ ನಾಯಿಗಳೊಂದಿಗೆ
ಕಂಡರೂ
ನಾನಾಗುವಿದಿಲ್ಲವೇಕೆ ಬುದ್ಧ?

ಬಾಗಿದ ಬೆನ್ನು
ಕೋಲು ಕೈಯಲ್ಲಿ
ಮುಖ ಬದನೆಕಾಯಿ ಬಜ್ಜಿ
ಕೂದಲು?
ಒಣಗಿದ ಭತ್ತದ ಹುಲ್ಲು
ಕೈಕಾಲು ಕಟ್ಟಿಗೆ
ಹೊಟ್ಟೆಯಂತೂ ಪೆಟ್ಟಿಗೆ
ಉಬ್ಬಸ ಎದೆನೋವು ...ವಗೈರೆ...ವಗೈರೆ...
ಕಂಡರೂ
ನಾನಾಗುವುದಿಲ್ಲವೇಕೆ ಬುದ್ಧ?

8 comments:

ಮಾವೆಂಸ said...

ಸರಳವಾಗಿ, ಸುಂದರವಾಗಿ ಬ್ಲಾಗ್ ರಚಿಸಿದ್ದೀರಿ. ಖುಷಿಯಾಯಿತು. ಧಾರ್ಮಿಕ ಮತ್ತು ವಾಸ್ತವಿಕಗಳ ಚರ್ಚೆ ನಿಮ್ಮ ಬ್ಲಾಗ್‌ನಲ್ಲಾಗಬೇಕು. ಶೀರ್ಷಿಕೆ ಬ್ಲಾಗ್‌ಗೆ ಹೊಂದುತ್ತದೆ. ಈ ಕವನವೂ ಚೆಂದವಿದೆ.

Krupesh said...

chennagiddu ee kavana. innoo jaasti bari

-Krupesh

ಯಜ್ಞೇಶ್ (yajnesh) said...

ತುಂಬಾ ಚೆನ್ನಾಗಿದ್ದು ಕವನ.

ನಾನು ಬುದ್ದನಾಗುವುದಿಲ್ಲ ಓದ್ತಾಯಿದ್ದರೇ ನಾವೇ ಬುದ್ದರಗೋ ಸಾದ್ತ್ಯತೆಯಿದ್ದು. ವಾಸ್ತವ ಸಂಗತಿಯನ್ನು ಮನಸ್ಸಿಗೆ ತಟ್ಟುವ ಹಾಗೆ ಬರದ್ದೆ.

venu said...

Tumba chennagide kavana. Saralavagi aste marmika vagirutte nimma barahada shaili.

ಸಿರಿರಮಣ said...

ಜಗದೀಶಣ್ಣ ಜಬರ್ದಸ್ತ ಇದ್ದು ತಕಳ.
ಗುದ್ದುತಿಂದು ಒದ್ದಾಡಿ,
ಬದ್ಧತೆಯ ಬಿಟ್ಟು ಬೀಡಾಡಿ,
ಎದ್ದೆದ್ದು ಜಿದ್ದಾಜಿದ್ದಿ ಮಾಡಿ
ರಾಡಿ ಎಬ್ಬಿಸುವ ಜೀ-ವನ ದಲ್ಲೇ
ಬಿದ್ದಾಡುವ ನಾವೇಕೆ ಬುದ್ಧರಾಗೋಣ ?

Sushrutha Dodderi said...

ನಾನಾಗುವುದಿಲ್ಲವೇಕೆ ಬುದ್ಧ?

ತುಂಬಾ ಒಳ್ಳೆಯ ಕವನ.. ಚಿಂತನೆಗೆ ನೂಕುತ್ತದೆ..

SHILU..... said...

namasty tumbaa chanaagiddu tadavaagi noodide

Nataraj said...

manasige tumba hattiravagide