Wednesday 25 June, 2008

ನನ್ನ ಗುರುಕುಲ..............

ಗುರುಕುಲವೆಂದರೆ..............

ಅಧ್ಯಾತ್ಮದ ನೋಟ.
ಸಾಮರ್ಥ್ಯದ ವೃಧ್ಧಿ.
ಕೌಶಲದ ಪ್ರಗತಿ.
ಭಾವನೆಯ ಉತ್ಕಟತೆ.
ಆತ್ಮೀಯ ಒಡನಾಡಿ.
ಕಣಕಣವು ಜೀವಸೆಲೆ.
ಕಣ್ಣಿಗೆ ತಂಪು.
ಕಿವಿಗೆ ಇಂಪು.
ಉದರಕ್ಕೆ ಸೊಂಪು.
ಮನದ ಆಹ್ಲಾದ.
ಶಿರದ ಹೊನ್ನ ಕಿರೀಟ.
ಒಳನೋಟದ ಒಸಗೆ.
ಬಯಲಿನ ಬೆಸುಗೆ.


ಗುರುಕುಲದಲ್ಲಿ..............

ಪರೀಕ್ಷೆಯ ಭಯವಿಲ್ಲ; ಎದುರಿಸುವ ಆತ್ಮವಿಶ್ವಾಸವಿದೆ.
ಶಿಕ್ಷಣದ ವ್ಯಾಪಾರವಿಲ್ಲ; ವ್ಯಾಪಾರದ ಶಿಕ್ಷಣವಿದೆ.
ಅಹಂಕಾರದ ನುಡಿಯಿಲ್ಲ; ಆತ್ಮವಿಶ್ವಾಸದ ನಡೆಯಿದೆ.
ಗೆಲುವಿನ ಹಂಬಲವಿಲ್ಲ; ಗೆಲುವೇ ಉಸಿರಾಗಿದೆ.
ತಲೆ ತಗ್ಗಿಸುವ ವರ್ತನೆಯಿಲ್ಲ; ತಲೆಯೆತ್ತಿ ನಡೆಯುವ ದಿಟ್ಟತನವಿದೆ.
ದೌರ್ಜನ್ಯ ದೂರದ ಮಾತು; ಸೌಜನ್ಯವೆ ಮನೆ ಮಾತು.
ಜೀವನಕ್ಕಾಗಿ ಕಲಿಕೆಯಲ್ಲ; ಜೀವನವೇ ಕಲಿಕೆ.


ಗುರುಕುಲದಲ್ಲಿ...................

ಸಂಸ್ಕಾರವಿದೆ.
ಸಂಸ್ಕೃತವಿದೆ.
ಆಧುನಿಕತೆಯಿದೆ.
ಆಂಗ್ಲಭಾಷೆಯಿದೆ.
ದೇಶಭಕ್ತಿಯಿದೆ.
ಹಿಂದಿ ಕಲಿಕೆಯಿದೆ.
ವೇದವಿದೆ.
ವಿಜ್ಞಾನವಿದೆ.
ರಾಜನೀತಿಯಿದೆ.
ಪೌರನೀತಿಯಿದೆ.
ಇತಿಹಾಸವಿದೆ.
ಭೂಗೋಳವಿದೆ.
ಆಚಾರವಿದೆ.
ವಿಚಾರವಿದೆ.
ಸಂಸ್ಕೃತಿಯಿದೆ.
ಪ್ರಗತಿಯಿದೆ.
ಧ್ಯಾನವಿದೆ.
ಶ್ರಮಸೇವೆಯಿದೆ.
ಮೌನವಿದೆ.
ಸಂಗೀತವಿದೆ.
ನೃತ್ಯವಿದೆ.
ಮೃದಂಗವಿದೆ.
ವೀಣೆಯಿದೆ.
ವೇಣುವಿದೆ.
ವಿಜ್ಞಾನ ಪ್ರಯೋಗವಿದೆ.
ಕರ್ಮಕಾಂಡ ಪ್ರಯೋಗವಿದೆ.
ಗೃಹ ವಿಜ್ಞಾನವಿದೆ.
ಕಂಪ್ಯೂಟರ್ ಶಿಕ್ಷಣವಿದೆ.
ಲೇಖನವಿದೆ.
ಭಾಷಣವಿದೆ.
ಅಭಿನಯವಿದೆ.
ಅನುಭವವಿದೆ.
ಪೂಜೆಯಿದೆ.
ಪ್ರಾರ್ಥನೆಯಿದೆ.


ಗುರುಕುಲದ ಆಚಾರ್ಯರೆಂದರೆ..................

ಅಮಿತ ಶಿಷ್ಯಪ್ರೇಮ.
ಅನವರತ ಕ್ರಿಯಾಶೀಲತೆ.
ಅವಿರತ ಪ್ರಯತ್ನ.
ಅಸಂಭವದ ಸಾಧ್ಯತೆ.
ಅನನ್ಯ ಗುಣಪೂರ್ಣತೆ.
ಅನಂತದೆಡೆಗೆ ಲಕ್ಷ್ಯ.
ಅಪೂರ್ವ ಸೃಷ್ಟಿಶೀಲತೆ.
ಅಗಣಿತ ವಿಷಯ ಜ್ಞಾನ.
ಅಭಿನಂದನೀಯ ನಿಷ್ಕಪಟತೆ.
ಅನುಪಮ ಗಾಂಭೀರ್ಯ.
ಅವ್ಯಾಜ ಕರುಣೆ.
ಅನುಭವದ ವಜ್ರಗಣಿ.


ಗುರುಕುಲದ ಮಕ್ಕಳೆಂದರೆ..............

ಅಧ್ಯಾತ್ಮದ ತುಡಿತ.
ಪ್ರಗತಿಯ ಮಿಡಿತ.
ವಿದ್ಯೆಯ ಹಂಬಲ.
ವಿನಯದ ಬೆಂಬಲ.
ಸೌಜನ್ಯದ ಗಣಿ.
ಔದಾರ್ಯದ ಧಣಿ.
ವಿನಯದ ಮೂರ್ತಿ.
ಸಾಧನೆಯ ಕೀರ್ತಿ.
ದೇಶಭಕ್ತಿಯ ಸೆಲೆ.
ವಿಶ್ವಪ್ರೇಮದ ನೆಲೆ.
ಗುರುವಿನ ಬಲ.
ಗುರಿಯೆಡೆಗೆ ಛಲ.
ವಿಜ್ಞಾನ ಬೆಂಗಾವಲು.
ವಿವೇಕ ಕಣ್ಗಾವಲು.
ಸ್ವಜೀವನ ಸ್ವೀಕೃತ.
ಸಮಾಜ ಸೇವೆಯಲ್ಲಿ ವ್ಯಾಪೃತ.

3 comments:

ಯಜ್ಞೇಶ್ (yajnesh) said...

ತುಂಬಾ ಸುಂದರವಾಗಿ ಮೂಡಿ ಬಂದಿದೆ. ಗುರುಕುಲದ ಬಗ್ಗೆ ಸಂಪೂರ್ಣ ಮಾಹಿತಿ ಗದ್ಯ/ಪದ್ಯದ ರೂಪದಲ್ಲಿ ಚೆನ್ನಾಗಿ ಬಂದಿದೆ.

ಈಗಿನ ಆಧುನಿಕ ಅಂತ ಕರೆಯುವ ಶಿಕ್ಷಣಕ್ಕೂ ಹಾಗು ಗುರುಕುಲದಲ್ಲಿ ನಡೆಯುತ್ತಿರುವ ಶಿಕ್ಷಣಕ್ಕೂ ಎನು ವ್ಯತ್ಯಾಸವೆಂಬುದು ಎಲ್ಲರಿಗೂ ಮನದಟ್ಟುವ ಹಾಗಿದೆ

venu said...

kannada pada punja gala bhandarada naduve gurukulavannu parichayisida vidhana slaganaarha......

NiTiN Muttige said...

namma gurukuladalli enuntu enulla!! ella ive.gurukulada bagge 10 saalalli 1000 padagala varnane nimma naija shailili iddu.
tumba kushi niditu..