Wednesday, 3 December, 2008

ಸಂಪ್ರತಿ - ನಮ್ಮ ನಾಯಕರು....

ಭಾರತದ ಭವಿಷ್ಯದ ನಾಯಕರಲ್ಲೊಬ್ಬರೆಂದು ಬಿಂಬಿತರಾಗಿರುವ ನಮ್ಮ ರಾಹುಲ್ ಗಾಂಧಿ ಮುಂಬಯಿ ಹತ್ಯಾಕಾಂಡೋತ್ತರ ಶೋಕಕಾಲದಲ್ಲಿ ಸಂತೋಷಕೂಟದಲ್ಲಿ ಮೈಮರೆತಿದ್ದರಂತೆ. ಹಾಗೆಂದು ಪತ್ರಿಕೆಗಳು ವರದಿ ಮಾಡಿವೆ.

ಇದು ಪ್ರಜಾಪ್ರಭುತ್ವದ ವೈಖರಿ. ರಾಜಪ್ರಭುತ್ವವನ್ನು ಭಾರತ ತಿರಸ್ಕರಿಸಿದ ಕಾರಣಗಳು ಯಾವುದು ಎನ್ನುವುದೇ ತಿಳಿಯುತ್ತಿಲ್ಲ. ಜನನಾಯಕ ಜನರ ನಡುವಿನಿಂದ ಮೇಲೆದ್ದು ಬರಬೇಕು, ಅವನಿಗೆ ಬಡತನದ ದುಃಖದುಮ್ಮಾನಗಳೇ ಮುಂತಾದ ಜನರ ಸಂಕಷ್ಟಗಳ ಅರಿವಿರಬೇಕು, ಅವನು ವಂಶವಾಹಿ ಅಧಿಕಾರಿಯಾಗಿರದೇ ಜನರಿಂದ ಆಯ್ಕೆಯಾದವನಾಗಿರಬೇಕು,ಐಶಾರಾಮಿಯಾಗಿರಬಾರದು, ಅವನು ಕೋಟೆಯೊಳಗಿನ ಅರಮನೆಯ ಸಿಂಹಾಸನದಲ್ಲಿ ಹೊಗಳುಭಟರ ನಡುವೆ ವಿರಾಜಮಾನನಾಗಿರದೇ ಸಾಮಾನ್ಯರೊಂದಿಗೆ ಬೆರೆತಿರುವವನಾಗಿರಬೇಕು,.........

ನನಗೆ ಗೊತ್ತಿಲ್ಲ, ರಾಜಪ್ರಭುತ್ವದ ತಿರಸ್ಕಾರದ ಕಾರಣಗಳು. ಇವೆಲ್ಲ ಇರಬಹುದೇನೋ ಅಂತ.

ಸರಿ, ನಾವೇನು ಸಾಧಿಸಿದೆವು? ದೇಶದ್ರೋಹಿಗಳಿಗೆ ಆರ್ಥಿಕ ಸಹಾಯ ಘೋಷಿಸುವ ಅಮರ್ ಸಿಂಗ್ ರಂತವರು, ರಾಹುಲ್ ಗಾಂಧಿಯಂತವರು, ಪ್ರಜಾರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದವರ ಕುಟುಂಬದವರನ್ನು ಅವಮಾನಿಸುವ ಅಚ್ಯುತಾನಂದನ್ ತರದವರು .......ಇವರೆಲ್ಲ ನಮ್ಮ ನಾಯಕರು.

ಮುಂದೇನು ಕಾದಿದೆಯೋ? ದೇವರಿಗೇ ಗೊತ್ತು.

2 comments:

Anonymous said...

ಜಗದೀಶರೇ ನಮಸ್ಕಾರ.
ನಮ್ಮ ನಾಯಕರು ಕೆಟ್ಟು ಕೆರ ಹಿಡಿದಿದ್ದಾರೆ ನಿಜ.
ಆದರೆ, ನಾವೇನು ಮಹಾ. ಅವಕಾಶ ಸಿಕ್ಕಿದರೆ ನಾವೂ ಹಾಗೆಯೇ ಅಲ್ಲವೇ. ನಮ್ಮನ್ನು ಪ್ರತಿನಿಧಿಸುವ ನಾಯಕರು ನಮ್ಮ ಮೊತ್ತವೇ ಆಗಿರುವಾಗ ಅವರೂ ಹಾಗಿರುವುದು ಸಹಜವಲ್ಲವೇ.
ಹೀಗೇ ಯೋಚಿಸುತ್ತಿದ್ದೆ. ಅಕಸ್ಮಾತ್ ನಮ್ಮ ನಾಯಕರು ನಮ್ಮೆಲ್ಲರ ದೌಷ್ಟ್ಯ, ಕ್ರೌರ್ಯದ ಒಟ್ಟು ಮೊತ್ತದಷ್ಟು ದುಷ್ಟರು, ಭ್ರಷ್ಟರು ಆಗಿದ್ದರೆ ನಾವೆಲ್ಲರೂ ಉಳಿಯುವುದು ಸಾಧ್ಯವಿತ್ತೇ? ಅವರೆಲ್ಲರೂ ಅಷ್ಟು ಎತ್ತರಕ್ಕೆ ಬೆಳದಿಲ್ಲದಿರುವುದರಿಂದ ನಾವೆಲ್ಲರೂ ಬದುಕಿದ್ದೇವೆ ಎಂದು ಭಾವಿಸಿದ್ದೇನೆ.
ಮೊನ್ನೆ ಒಂದು ಚಾನಲ್್ನಲ್ಲಿ ಖ್ಯಾತ ಸೆಲೆಬ್ರಿಟಿ ಶೋಭಾ ಡೇ 'ಮುಂಬಯಿ ಹತ್ಯಾಕಾಂಡದ ಸಮಯದಲ್ಲಿ ಸಮರ್ಥ ನಾಯಕತ್ವವನ್ನು ಕೊಡದ ಅಷ್ಟೂ ರಾಜಕಾರಣಿಗಳನ್ನು ಕೆಳಗಿಳಿಸಬೇಕು. ಮಡಿದವರ ಶಾಂತಿಗಾಗಿ ಮೋಂಬತ್ತಿ ಹತ್ತಿಸಿದರೆ ಸಾಲದು. Public action needs'ಹಾಗೆ ಹೀಗೆ ಎಂದು ಸುಮಾರು ಹೇಳಿದರು. ಕಡೆಗೆ, ಸರಿ, ಯಾರು ನಮ್ಮನ್ನು ಲೀಡ್ ಮಾಡಬೇಕು? ಎಂಬುದು ಗೊತ್ತಾಗಲೇ ಇಲ್ಲ.

ಭಾರತೀಶ

ಸಿರಿರಮಣ said...

ಜಗದೀಶ್ ಭಯ್ಯಾ, ಎಷ್ಟ ದೂಡ್ ದ್ರೂ ಹೋಗ್ತಿಲ್ಲೆ ನಿಂಗೆ ಮೇಲು, ನನ್ನ ಹತ್ರ ಇಪ್ಪ ವಿಳಾಸ (jagadeshasharma@gmail.com)
ನೀ ವೊಂದು ಪತ್ರ ಕಳ್ಸು ನನ್ನ ವಿಳಾಸಕ್ಕೆ ಆಗ ಪುನಃ ಪ್ರಯತ್ನ ಮಾಡ್ತಿ.ನಂದು ಎಡ್ರೆಸ್ಸು ..
geervaanee@gmail.com