'ಟೈಮ್ ಮ್ಯಾನೇಜ್ ಮೆಂಟ್' ಪುಸ್ತಕ ಓದ್ತಾ ಇದ್ದೆ. 'ಸ್ಪೀಡಾಗಿ ಓದುವುದು ಅಂತ ಒಂದು ಅಧ್ಯಾಯ ಗಮನ ಸೆಳೆಯಿತು.
ತುಂಬಾ ದಿನಗಳಿಂದ ಓದುವ ಬಗ್ಗೆ ಗುರುಕುಲದ ಮಕ್ಕಳಿಗೆ ವಿಧಾನವೊಂದನ್ನು ರೂಪಿಸಿಕೊಡುವ ಮನಸ್ಸಿತ್ತು. ನನಗನ್ನಿಸಿದಂತೆ 'ಓದುವುದು ಹೇಗೆ?' ಅನ್ನುವ ಕುರಿತು ಸಾಕಷ್ಟು ಶೋಧನೆಯಾಗಿಲ್ಲ. ಎಲ್ಲ ಶಿಕ್ಷಕರೂ, ಎಲ್ಲ ಪೋಷಕರೂ ಮಕ್ಕಳಿಗೆ ಓದಿ ಅಂತ ಹೇಳ್ತಾನೇ ಇರ್ತಾರೆ. ಆದರೆ ಅದು ಹೇಗೆ? ಅನ್ನೋದನ್ನ ಯಾರೂ ಹೇಳಿಕೊಡಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮದೇ ವಿಧಾನವನ್ನು ರೂಪಿಸಿಕೊಂಡಿರುತ್ತಾರೆ. ಉಳಿದ ವಿದ್ಯಾರ್ಥಿಗಳು ಕಷ್ಟಪಡುತ್ತಿರುತ್ತಾರೆ.
ಇವುಗಳನ್ನು ನಾನಿನ್ನೂ ಪ್ರಯೋಗಕ್ಕೆ ಅಳವಡಿಸಿಲ್ಲ. ಲೇಖಕರ ಅಭಿಪ್ರಾಯವನ್ನು ಇಲ್ಲಿ ಸಾರಾಂಶಗೊಳಿಸಿದ್ದೇನೆ.
* 1. ಪ್ರೀವ್ಯೂ
* 2. ಸ್ವೀಪಿಂಗ್
* 3. ಬ್ರಷಿಂಗ್
ಹೀಗೆ ಮೂರು ಕ್ರಮಗಳನ್ನು ಲೇಖಕರು ನಿರೂಪಿಸ್ತಾರೆ.
1. ಸಿನಿಮಾಗಳನ್ನು ಬಿಡುಗಡೆ ಮಾಡುವ ಮೊದಲು ಕೆಲವರಿಗೆ ತೋರಿಸುವಂತೆ ಪುಸ್ತಕವನ್ನು ಪೂರ್ಣ ಓದಲಾರಂಭಿಸುವ ಮೊದಲು ಮೇಲುಮೇಲೆ ಓದಬೇಕು. ಇದು 'ಪ್ರೀವ್ಯೂ'.
2. 'ಪ್ರೀವ್ಯೂ' ಮಾಡಲು 'ಸ್ವೀಪಿಂಗ್' ತಂತ್ರ ಬಳಸಬೇಕು. ಪುಟದ ಮೇಲಿನಿಂದ ಕೆಳಗಿನವರೆಗೆ ವೇಗವಾಗಿ ಓದುವುದು. ಸ್ವೀಪಿಂಗ್ ಮಾಡುವಾಗ ತೋರು ಬೆರಳನ್ನು ಹಾವು ಹರಿದಂತೆ ವಕ್ರಗತಿಯಲ್ಲಿ ಪುಟದ ಮೇಲಿನಿಂದ ಕೆಳಗಿನವರೆಗೆ ಓಡಿಸಬೇಕು, ಕಣ್ಣು ಕೈ ತುದಿಯನ್ನು ಹಿಂಬಾಲಿಸಬೇಕು.
3. ಪ್ರತಿ ಪುಟವನ್ನು ಎಡದಿಂದ ಬಲಕ್ಕೆ ಪ್ರತಿ ಲೈನ್ ಮೇಲೆ ಕೈಯೋಡಿಸಿ, ಕಣ್ಣು ಹಿಂಬಾಲಿಸುವಾಂತಾದರೆ ಅದು 'ಬ್ರಷಿಂಗ್'.
ಇಷ್ಟಾದ ಮೇಲೆ ಪುಸ್ತಕದ ಪೂರ್ಣ ಓದು.
ಅದಕ್ಕೆ ಕೆಲವು ಸೂಚನೆಗಳು :
1. ಬೆನ್ನು ನೇರವಾಗಿ ಕುಳಿತುಕೊಳ್ಳಬೇಕು.
2. ಪುಸ್ತಕ 45ಡಿಗ್ರಿ ಕೋನದಲ್ಲಿರಬೇಕು.
3. ಪರಿಸರ ನೀಟಾಗಿರಬೇಕು.
ಈ ಬಗ್ಗೆ ನಿಮ್ಮ ಅನುಭವ - ಅಧ್ಯಯನಗಳ ನೆಲೆಯಲ್ಲಿ ಸಲಹೆಗಳನ್ನು ಕೊಡಿ.
2 comments:
ನಮಸ್ತೇ.
ನನ್ನ ಸ್ವಂತ ಅನುಭವ.
ಓದುವ ವಿಷಯವನ್ನು ಅರ್ಥಮಾಡಿಕೊಳ್ಳುತ್ತೇವೆ ಎಂಬ ವಿಶ್ವಾಸ ಗಟ್ಟಿಯಾಗಿರಬೇಕು.
ಓದುವ ಹಂತದಲ್ಲಿ ಯಾರ ಸಾಮರ್ಥ್ಯದೊಂದಿಗೂ ಸ್ಪರ್ಧೆಗೆ ಬೀಳಬಾರದು.
ಒಟ್ಟಾರೆ, ಓದುವ ಪ್ರಕ್ರಿಯೆ ಆತಂಕಮುಕ್ತವಾಗಿರಬೇಕು.
ಹಾಗಾದಾಗ ಮೈ ಮನಸ್ಸುಗಳು ತಮ್ಮ ಅಷ್ಟೂ ಸಾಮರ್ಥ್ಯವನ್ನು ಯುಟಿಲೈಸ್ ಮಾಡಿಕೊಳ್ಳುತ್ತವೆ.
ಹೀಗೇ ಒಮ್ಮೆ ಸಿದ್ಧಮೂಲೆ ಶಂಕರನಾರಾಯಣ ಭಟ್ಟರಲ್ಲಿ ಮಾತಾಡುತ್ತಿದ್ದಾಗ ಕೆಲವರಿಗೆ ಕೇವಲ ಒಂದು ಗಂಟೆಯಲ್ಲಿ ನೂರಿನ್ನೂರು ಪುಟಗಳಷ್ಟು ಓದುವ ಸಾಮರ್ಥ್ಯ ಇರುತ್ತದೆ ಅಂತ ಹೇಳಿದ್ದರು.
ಪ್ರಾಯಶಃ ಅವರ ಮನಸ್ಥತಿ ಆ ಪರಿ ಪಕ್ವವಾಗಿರುತ್ತೆ ಅಂತ ಅನಿಸುತ್ತೆ.
ಇಷ್ಟಾದರೆ ಬೇಕಾದಷ್ಟಾಯಿತು ಅಂತ ನನಗನ್ನಿಸತ್ತೆ.
ನೀವೇನಂತೀರಿ?
ಹೊಸತು, ಹೊಸೆದುಕೊಳ್ಳುವಂತಹುದ್ದು ಇದ್ದರೆ ದಯವಿಟ್ಟು ತಿಳಿಸಿ.
ನಾನೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ.
ಬರುತ್ತೇನೆ.
ನಾನೇ ಭಾರತೀಶ
Jagadeeshanna,
ee bagge neevu 'Double Your Learning Power' by Geoffrey A.Dudley pustaka odabahudu. ee pustakadallina kelavu 'kaDime samayadalli hechchu oduvikeya' tantragaLu vishwadaadyanta prashamsegoLapattavu.
Vichaaraprachodaka blog-gaagi dhanyavadagaLu...
>>Madhu Dodderi
Post a Comment